Recent News & Updates

ರೋಟರಾಕ್ಟ್ ಪದಗ್ರಹಣ ಸಮಾರಂಭ

ಭಟ್ಕಳ: ಆಗಸ್ಟ್ 07 : “ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಅವರಲ್ಲಿ ದೇಶದ ಬಗ್ಗೆ ಕಾಳಜಿ ಮೂಡುತ್ತದೆ” ಎಂದು ರೋಟೆರಿಯನ್ ಅತುಲ್ ವಿ ಕಾಮತ್ ಹೇಳಿದರು. ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದಲ್ಲಿ ರೋಟರಾಕ್ಟ್ ಕ್ಲಬ್ ಭಟ್ಕಳ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, “ಪ್ರಪಂಚದ 180 ದೇಶಗಳಲ್ಲಿ ಸುಮಾರು ಹನ್ನೊಂದು ಸಾವಿರ ರೋಟರಾಕ್ಟ್ ಕ್ಲಬ್ ಗಳಿದ್ದು ಅವು 2 ಲಕ್ಷ ಸದಸ್ಯರನ್ನು ಹೊಂದಿವೆ ಮತ್ತು ಅವರೆಲ್ಲರೂ ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಬದಲಾವಣೆಯನ್ನು ತರಲು ಪರಿಶ್ರಮಿಸುತ್ತಿದ್ದಾರೆ” ಎಂದರು.ಭಟ್ಕಳ ರೋಟರಿ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಸ್ವಾಗತಿಸಿದರು, ಪ್ರಾಂಶುಪಾಲ ಶ್ರೀನಾಥ್ ಪೈ ಕ್ಲಬ್ ಸದಸ್ಯರಿಗೆ ಶುಭ ಹಾರೈಸಿದರು, ಘಟಕ ಸಂಯೋಜನಾಧಿಕಾರಿ ದೇವೇಂದ್ರ ಕಿಣಿ ನೂತನ ಕ್ಲಬ್ ಸದಸ್ಯರನ್ನು ಸಭಿಕರಿಗೆ ಪರಿಚಯಿಸಿದರು. ಕೋವಿಡ್ ಸಾಂಕ್ರಾಮಿಕದಿಂದಾಗಿ ವಿದ್ಯಾಭ್ಯಾಸದಿಂದ ದೂರ ಉಳಿದಿರುವ ಬಡ ವಿದ್ಯಾರ್ಥಿಗನ್ನು ಮರಳಿ ಕಲಿಕೆಯಲ್ಲಿ ತೊಡಗಿಸಲು ರೋಟರಿ ಹಮ್ಮಿಕೊಂಡಿರುವ ವಿದ್ಯಾಸೇತು ಯೋಜನೆಯ ಅನ್ವಯ ಭಟ್ಕಳ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು ಹಾಗೂ 2020 – 21 ನೇ ಸಾಲಿನಲ್ಲಿ ರೋಟರಾಕ್ಟ್ ಕ್ಲಬ್ ಗೆದ್ದ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ಕ್ಲಬ್ ಸದಸ್ಯರಿಗೆ ವಿತರಿಸಲಾಯಿತು. ರೋಟರಿ ಕಾರ್ಯದಶರ್ಿ ಶ್ರೀನಿವಾಸ್ ಪಡಿಯಾರ್, ರೋಟರಿ ಪ್ರಮುಖ ಡಾ. ಗೌರೀಶ್ ಪಡುಕೋಣೆ ಮತ್ತು ರೋಟರಾಕ್ಟ್ ನೂತನ ಅಧ್ಯಕ್ಷೆ ಶ್ವೇತಾ ಆಚಾರ್ಯ ಉಪಸ್ಥತರಿದ್ದರು. ಮನಿಷಾ ಮೇಸ್ತ ನಿರೂಪಿಸಿದರು, ರೋಟರಾಕ್ಟ್ ಕಾರ್ಯದರ್ಶಿ ರಶ್ಮಿ ಮಹಾಲೆ ವಂದಿಸಿದರು.

Welcome To SGS Degree College Bhatkal

Shree Guru Sudhindra College established in the year 1997 with the primary objective of imparting Quality Education combined with knowledge and skills to the students of in and around Bhatkal town and thereby preparing them to be the mascot of future corporate leaders and exposing them to face professional challenges in the corporate world.

Courses Offered

BCA

Bachelor of Computer Application

BBA

Bachelor of Business Administration

BA

Bachelor of Arts

B.Com

Bachelor of Commerce

Companies that patronized our campus

A vibrant and dedicated Placement Cell is an integral part of any institution engaged in higher education.

Our Training Partners

Student Testimonials

Play Video
Play Video

SGS Degree College

Ayodhya Nagar, Sagar Road
Bhatkal - 581320